ನಿಮ್ಮ Windows 10 ಸಾಧನದಲ್ಲಿನ ಯಾವುದೇ ವೀಡಿಯೊ ಅಪ್ಲಿಯಲ್ಲಿ VP9 ವೀಡಿಯೊಗಳನ್ನು ಪ್ಲೇ ಮಾಡಿ. VP9 ಇಂಟರ್ನೆಟ್ ನಲ್ಲಿ ಸ್ತ್ರೀಮಿಂಗ್ ಗಾಗಿ ಒಂದು ಜನಪ್ರಿಯ ವೀಡಿಯೊ ಕೋಡೆಕ್ ಆಗಿದೆ. ಹೊಸ ಸಾಧನಗಳಲ್ಲಿ ಯಂತ್ರಾಂಶ ಸಾಮರ್ಥ್ಯಗಳ ಲಾಭ ಪಡೆಯಲು ಈ VP9 ವೀಡಿಯೊ ವಿಸ್ತರಣೆಗಳನ್ನು ವಿನ್ಯಾಸಗೊಳಿಸಲಾಗಿದೆ. VP9 ವೀಡಿಯೊಗಳಿಗೆ ಹಾರ್ಡ್ ವೇರ್ ಬೆಂಬಲವಿಲ್ಲದ ಸಾಧನಗಳಿಗೆ, ಸಾಫ್ಟ್ ವೇರ್ ಬೆಂಬಲವನ್ನು ಒದಗಿಸಲಾಗುತ್ತದೆ, ಆದರೆ ಪ್ಲೇಬ್ಯಾಕ್ ಅನುಭವವು ವೀಡಿಯೊ ರೆಸೊಲ್ಯುಶನ್ ಮತ್ತು ಸಾಧನದ ಕಾರ್ಯಕ್ಷಮತೆಯ ಆಧಾರದ ಮೇಲೆ ಬದಲಾಗಬಹುದು. ಹಾರ್ಡ್ ವೇರ್ ಆಧಾರಿತ ವೀಡಿಯೊ ಎನ್ಕೋಡರ್ ಹೊಂದಿರದ ಸಾಧನಗಳಲ್ಲಿ ಈ ವಿಸ್ತರಣೆಗಳು VP8 ಮತ್ತು VP9 ವಿಷಯವನ್ನು ಎನ್ಕೋಡ್ ಮಾಡಲು ಸಹ ಅವಕಾಶ ಮಾಡಿಕೊಡುತ್ತವೆ.