Windows 10 ನಲ್ಲಿ Xbox ಅನುಭವ.
Xbox One ಮತ್ತು Windows 10 ಸಾಧನಗಳಾದ್ಯಂತ ನಿಮ್ಮ ಸ್ನೇಹಿತರು, Xbox ಆಟಗಳು ಮತ್ತು ಸಾಧನೆಗಳನ್ನು ಒಟ್ಟಿಗೆ ತರುತ್ತದೆ. Xbox Live ಸಮುದಾಯಕ್ಕೆ ಸಂಪರ್ಕಿತವಾಗಿರಿ, ನಿಮ್ಮ ಸ್ನೇಹಿತರು ಏನನ್ನು ಆಡುತ್ತಿದ್ದಾರೆಂಬುದನ್ನು ನೋಡಿ, ಆಟದ ಕ್ಲಿಪ್ಗಳನ್ನು ಮತ್ತು ಸ್ಕ್ರೀನ್ಶಾಟ್ಗಳನ್ನು ಹಂಚಿಕೊಳ್ಳಿ. PC ಮತ್ತು Xbox One ನಲ್ಲಿ ಗೇಮರ್ಗಳೊಂದಿಗೆ ಪಾರ್ಟಿ ಚಾಟ್ಗಳನ್ನು ಪ್ರಾರಂಭಿಸಿ ಮತ್ತು Fable Legends ಮತ್ತು Gigantic ಆಟಗಳೊಂದಿಗೆ ಕ್ರಾಸ್-ಸಾಧನ ಮಲ್ಟಿಪ್ಲೇಯರ್ ಪ್ರಾರಂಭಿಸಿ. ಮತ್ತು Xbox One ಕಂಟ್ರೋಲರ್ ಬಳಸುತ್ತಿರುವಾಗ ನಿಮ್ಮ ಮನೆಯಲ್ಲಿ ನಿಮ್ಮ ನೆಚ್ಚಿನ ಆಟಗಳನ್ನು Xbox One ನಿಂದ Windows 10 PC ಗೆ ಸ್ಟ್ರೀಮ್ ಮಾಡಿ.
ಹಕ್ಕುನಿರಾಕರಣೆ: ಕೆಲವು ವೈಶಿಷ್ಟ್ಯಗಳಿಗೆ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಅಗತ್ಯವಿರುತ್ತದೆ (ISP ಶುಲ್ಕಗಳು ಅನ್ವಯವಾಗುತ್ತವೆ). Xbox Live ವೈಶಿಷ್ಟ್ಯಗಳು ಬೆಂಬಲಿತ ಆಟಗಳೊಂದಿಗೆ Xbox Live-ಬೆಂಬಲಿತ ದೇಶಗಳಲ್ಲಿ ಮಾತ್ರ ಲಭ್ಯವಿರುತ್ತದೆ, xbox.com/live/countries ನೋಡಿ. ಕ್ರಾಸ್-ಸಾಧನ ಆಟವನ್ನು ಸೀಮಿತ ಸಂಖ್ಯೆಯ ಆಟಗಳು ಬೆಂಬಲಿಸುತ್ತವೆ, ಹೆಚ್ಚುವರಿ ಆಟಗಳು ಮುಂದೆ ಬರಲಿವೆ. Fable Legends ಮತ್ತು Gigantic ಇವುಗಳು 2015 ರ ರಜಾದಿನದಿಂದ ಪ್ರಾರಂಭಿಸಿ ಲಭ್ಯವಿರುತ್ತವೆ. ಒಂದು ಬಾರಿಗೆ ಒಂದು ಸಾಧನಕ್ಕೆ ಸ್ಟ್ರೀಮ್ ಮಾಡಿ, Xbox One ನಿಂದ ಮಲ್ಟಿಪ್ಲೇಯರ್ ಜೊತೆಗೆ ಸ್ಟ್ರೀಮ್ ಮಾಡುವುದಕ್ಕೆ Xbox Live Gold ಸದಸ್ಯತ್ವ ಅಗತ್ಯವಿರುತ್ತದೆ (ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ). ಪಾರ್ಟಿ ಚಾಟ್ಗಳು, ಕ್ರಾಸ್-ಸಾಧನ ಮಲ್ಟಿಪ್ಲೇಯರ್ ಮತ್ತು ಆಟದ ಕ್ಲಿಪ್ಗಳು ಮತ್ತು ಸ್ಕ್ರೀನ್ಶಾಟ್ಗಳನ್ನು ಹಂಚಿಕೊಳ್ಳುವಿಕೆಯನ್ನು ಒಳಗೊಂಡು ಕೆಲವು ವೈಶಿಷ್ಟ್ಯಗಳು Windows 10 PC ಸಾಧನಗಳಲ್ಲಿ ಮಾತ್ರ ಲಭ್ಯವಿವೆ.