SnatchApp ಇದು ಜನರಿಗೆ ಮತ್ತು ಉದ್ಯಮಗಳಿಗೆ ಜಗತ್ತಿನಾದ್ಯಂತ ಅಂತರ್ಜಾಲ ಸಂಪರ್ಕದ ಮುಖೇನ ಸಂಪರ್ಕ ಮಾಡಲು ಇರುವ ಒಂದು ಸಂದೇಶ ಕಳುಹಿಸುವ ಮತ್ತು ಕರೆ ಮಾಡುವ ಉಚಿತ ಯಾಪ್.
ಅನಂತಾನಂತವಾಗಿ ಗೂಢಲಿಪೀಕರಿಸಿದ ಸಂದೇಶಗಳನ್ನು, ತ್ವರಿತ ಧ್ವನಿ ಸಂದೇಶಗಳು, ಚಿತ್ರಗಳು, ವಿಡಿಯೋಗಳು, ಕಡತಗಳು, ಎಮೋಜಿಗಳು, ಕರೆಗಳು ಮತ್ತು ವಿಡಿಯೋ ಕರೆಗಳನ್ನು ಕಳುಹಿಸಲು ಮತ್ತು ಪಡೆಯಲು ಇರುವ ಒಂದು ಸುಲಭ ಉಪಾಯ.
SnatchApp ನ ನಮ್ಮ ಗುರಿ ಸರಳವಾದದ್ದು: ನೀವು ಕಾಳಜಿ ಪಡುವವರ ಜೊತೆಯಲ್ಲಿ ಸದಾ ಸಂಪರ್ಕದಲ್ಲಿರುವುದಕ್ಕೆ ಸಹಾಯ ಮಾಡುತದೆ. ಆ ಗುರಿಯನ್ನು ಫಲದಾಯಕವಾಗಿ ಮಡುವ ನಿಟ್ಟಿನಲ್ಲಿ, ನಾವು ಒಂದು ಉಚಿತ, ರಕ್ಷಿತ, ಬಳಕೆದಾರ-ಸ್ನೇಹಿ ಮತ್ತು ಎಲ್ಲೆಲ್ಲೂ ಸಿಗುವಂಥಹ ಸಾಧನವನ್ನು ತಯಾರಿಸಿದ್ದೇವೆ. ನಿಮ್ಮ ಎಲ್ಲಾ ಸಾಧನಗಳಿಂದಲೂ ಒಂದೇ ಸಮಯದಲ್ಲಿ ನಿಮ್ಮ ಸಂದೇಶಗಳನ್ನು ತಲುಪಲೂ ಸಾಧ್ಯ.
SnatchApp ಚ್ಯಾಟ್ಗಳನ್ನು ಒಂದುಗೂಡಿಸುತ್ತದೆ ಮತ್ತು ಪ್ರಪಂಚದ ಪ್ರತಿಯೊಂದು ದೇಶದಲ್ಲೂ ಲಕ್ಷಾಂತರ ಸಂದೇಶಗಳನ್ನು ಖಾಸಗಿಯಾಗಿ ಮತ್ತು ಸುರಕ್ಷಿತವಾಗಿ ವಿನಿಮಯ ಮಾಡಿಕೊಳ್ಳಲು ಅನುಮತಿಸುತ್ತದೆ.
SnatchApp 53 ಭಾಷೆಗಳಲ್ಲಿ ಲಭ್ಯ.
SnatchApp ಏಕೆ ಉಪಯೋಗಿಸಬೇಕು:
• ಉಚಿತ ಧ್ವನಿ ಮತ್ತು ಗೂಢಲಿಪೀಕರಿಸಿದ ವಿಡಿಯೋ ಕರೆಗಳು: ನಿಮ್ಮ ಗೆಳೆಯರು ಮತ್ತು ಕುಟುಂಬದವರ ಜೊತೆಯಲ್ಲಿ, ಅವರು ವಿದೇಶದಲ್ಲಿದ್ದರೂ ಸಹಾ, ಅವರೊಂದಿಗೆ ಸಂಪರ್ಕದಿಂದಿರಲು ನಿಮ್ಮ ಪಿಸಿಯನ್ನು ಅಥವಾ ಸ್ಮಾರ್ಟ್ಫೋನನ್ನು ಉಚಿತವಾಗಿ ಉಪಯೋಗಿಸಿ. SnatchApp ನಿಮ್ಮ ಸೆಲ್ ಪ್ಲ್ಯಾನ್ನ ಧ್ವನಿ ಸಮಯವನ್ನು ಉಪಯೋಗಿಸದೆ ನಿಮ್ಮ ಅಂತರ್ಜಾಲ ಸಂಪರ್ಕವನ್ನು (4ಜಿ/3ಜಿ/2ಜಿ/ಎಡ್ಜ್ ಅಥವಾ ವೈ-ಫೈ, ದೊರಕಿದಂತೆ) ಉಪಯೋಗಿಸುತ್ತದೆ, ಇದರಿಂದ ನೀವು ಪ್ರತಿ ಸಂದೇಶ ಅಥವಾ ಕರೆಗೂ ಹಣ ಕೊಡುವ ಅಗತ್ಯತೆ ಇರುವುದಿಲ್ಲ. (ಗಮನಿಸಿ: ವೈ-ಫೈ ನಲ್ಲಿ ಕರೆಗಳು ಉಚಿತ. ಸಾಮಾನ್ಯ ದತ್ತಾಂಶ ಶುಲ್ಕ ಅನ್ವಯವಾಗಬಹುದು).
• ರಕ್ಷಿತ ಸಂದೇಶ ಸಂವಾಹಕ ಮತ್ತು ನಂಬಿಕಸ್ಥ ಸಂಪರ್ಕಗಳು: ಎಲ್ಲಾ ಸಂದೇಶಗಳು ಮತ್ತು ಕರೆಗಳು ನಖ-ಶಿಖಾಂತ ಗೂಢ ಲಿಪೀಕರಿಸಲ್ಪಟ್ಟಿವೆ. ನೀವು ಸರಿಯಾದ ವ್ಯಕ್ತಿಯೊಂದಿಗೆ ಸಂಬಾಷಿಸುತ್ತಿರುವಿರೆಂಬುದನ್ನು ಖಾತ್ರಿಪಡಿಸಿಕೊಳ್ಳಲು ನಖ-ಶಿಖಾಂತ ಗೂಢ ಲಿಪೀಕರಣ ರಕ್ಷಣೆಯನ್ನು ಪರೀಕ್ಷಿಸಿಕೊಳ್ಳಿ.
• ಗುಂಪು ಚ್ಯಾಟ್ ಮತ್ತು ಕರೆಗಳು: ನಿಮಗೆ ವಿಶೇಷವಾಗಿರುವ ವ್ಯಕ್ತಿಗಳೊಂದಿಗೆ ಸಂಪರ್ಕವಿರಿಸಿಕೊಳ್ಳಲು SnatchApp ಅನ್ನು ಬಳಸಿಕೊಳ್ಳಿರಿ. ಗುಂಪು ಕರೆಗಳನ್ನು ಮಾಡುವುದು. ದೊಡ್ಡ ವಿಡಿಯೋಗಳ, ಪಠ್ಯ, ಯಾವುದೇ ತರಹೆಯ ಕಡತಗಳ, ಚಿತ್ರಗಳ, ಧ್ವನಿ ಸುರಳಿಗಳ, ಸ್ಥಳ ಮಾಹಿತಿಯ ಮತ್ತು ಇನ್ನಷ್ಟರ ಗುಂಪು ಹಂಚಿಕೆಯ ಮಜಾ ತೆಗೆದುಕೊಳ್ಳಿರಿ.
• SnatchApp ಜಾಲತಾಣ: SnatchApp ನಿಮ್ಮ ಜಾಲತಾಣ ವೀಕ್ಷಕದಲ್ಲಿ ಸಹಾ ಲಭ್ಯ. https://web.snatchapp.me
• ಬಾಟ್ ಗಳಿಗೆ ಹೇಳಿ ಮಾಡಿಸಿದಂಥಹ ಚಾನಲ್: ನೀವು ಒಂದು ವೇಳೆ ಯಾವುದೇ ಚ್ಯಾಟ್ಬಾಟ್ ರಚಿಸುವ ಮತ್ತು ಜಾರಿಗೊಳಿಸುವ ಯೋಚನೆ ಹೊಂದಿದ್ದರೆ, ಅವುಗಳನ್ನು SnatchApp ನ ಖಾಸಗಿ ಮತ್ತು ರಕ್ಷಿತ ಅಪ್ಪ್ಲಿಕೇಶನ್ ಉಪಯೋಗಿಸಿ ಇಲ್ಲಿ ನಿಯೋಜಿಸಬಹುದು, ಪರೀಕ್ಷಿಸಬಹುದು ಮತ್ತು ನಿಮ್ಮ ಬಾಟ್ ಜೊತೆ ಕಾರ್ಯಕಲಾಪ ನಡೆಸಬಹುದು.
• ನೈಜ ಸಮಯ ಸ್ಥಳ: ಇತರರಿಗೆ ನೀವು ಎಲ್ಲಿದ್ದೀರಿ ಎಂದು ಹೇಳುವುದರ ಬದಲು, ನೈಜ-ಸ್ಥಾನ ಹಂಚಿಕೆಯನ್ನು ಉಪಯೋಗಿಸಿ ಭೂಪಟಗಳೊಂದಿಗೆ ನಿಮ್ಮ ಸಂಭಾಷಣೆಯನ್ನು ಸಮ್ಮಿಳಿಸಿ.
• ನಿಮ್ಮ ಧ್ವನಿಯನ್ನು ಬದಲಾಯಿಸಿ: ನೀವು ಮಸಾಲೆ ಸೇರಿಸಿ ನಿಮಗಿಷ್ಟವಾದವರಿಗೆ ಆಶ್ಚರ್ಯಚಕಿತಗೊಳಿಸಲು ಇಚ್ಚಿಸುತ್ತೀರಾ? SnatchApp ನಿಮ್ಮ ಧ್ವನಿ ಮಟ್ಟ್ವವನ್ನು ಬದಲಾಯಿಸುವ ಅವಕಾಶ ಮಾಡಿಕೊಡುತ್ತದೆ. ನಿಮ್ಮ ಬದಲಾಯಿಸಿದ ಧ್ವನಿಯನ್ನು ಕೇಳುವ ಮಜಾ ತೆಗೆದುಕೊಳ್ಳಿ!
ರಕ್ಷಣೆ:
• ರಕ್ಷಿತ: SnatchApp ನಲ್ಲಿರುವ ಎಲ್ಲಾ ಸಂದೇಶಗಳು 256-ಬಿಟ್-ಸಿಮೆಟ್ರಿಕ್ ಎಇಎಸ್ ನಿಗೂಢ ಲಿಪಿ, 2048-ಬಿಟ್ ಆರ್ಎಸ್ಎ ನಿಗೂಢ ಲಿಪಿ ಉಪಯೋಗಿಸಿ ನಿಗೂಢ ಲಿಪಿಗೊಂಡಿವೆ ಮತ್ತು ಪ್ರತಿಯೊಂದು ಸಂಭಾಷಣೆಗೂ ಒಂದು ಸಂರಕ್ಷಿತ ವಿನಿಮಯ ಕೀ ಇದೆ. SnatchApp ಮೂಲಕ ಕಳುಹಿಸಿದ ಯಾವುದೇ ಸಂದೇಶಗಳನ್ನು ನಾವು ಓದಲಾಗುವುದಿಲ್ಲ. SnatchApp ಮೂಲಕ ಕಳುಹಿಸಿದ ಸಂದೇಶಗಳ ಮತ್ತು ನೀವು ಕಳುಹಿದ ಮಾಧ್ಯಮ ಕಡತಗಳ ನಾವು ಮಾಲೀಕರಲ್ಲ.
• ನುಂಗಣ್ಣ: ನಿಮ್ಮ ಎಲ್ಲಾ ಸಾಧನಗಳ, ಸಂದೇಶಗಳನ್ನು ಮತ್ತು ಚಿತ್ರಗಳನ್ನು ಒಳಾಂಶಗಳನ್ನು ಮರಳಿ ಬಾರದಂತೆ ಅಳಿಸಿಹಾಕಬಹುದು.
• ಕಣ್ಮರೆಯಾಗುವ ಸಂದೇಶಗಳನ್ನು ಆಪಿಲಿಸಿ/ಆಪಿಸಿ: ಪೂರ್ವನಿಯೋಜನೆಯಂತೆ, ಸಂಭಾಷಣೆಯಲ್ಲಿ ಕಳುಹಿಸಿದ ಎಲ್ಲಾ ಸಂದೇಶಗಳೂ ನೋಡಿದ ನಂತರ ಕಣ್ಮರೆಯಾಗುತ್ತವೆ.
• ಟೈಮರ್ ಸೆಟ್ ಮಾಡಿರಿ: ನಿಮ್ಮ ಎಲ್ಲಾ ಸಂದೇಶಗಳ ಸಮಯವನ್ನು ಸಂರಚಿಸಿ.
• ಸುರಕ್ಷ ಸಂಪರ್ಕ ಸಾಧಿಸಿ: ನಿಮ್ಮ ವಿಳಾಸ ಪುಸ್ತಕ ಎಂದೆಂದಿಗೂ ನಿಮ್ಮ ಖಾಸಗಿಯದ್ದಾಗಿರುತ್ತದೆ ಮತ್ತು ನಮ್ಮ ಸರ್ವರ್ ಗಳಲ್ಲಿ ಸಂಗ್ರಹಿಸಲ್ಪಟ್ಟಿರುವುದಿಲ್ಲ. ಇದು ಗೂಗಲ್, ಯಾಹೂ, ಔಟ್ಲುಕ್, ಇಮೇಲ್, ಫೋನ್ ಒಂದಾಗಿಸಿರುವ ಗೆಳೆಯ ಶೋಧಕ.
• 100% ಉಚಿತ ಮತ್ತು ಜಾಹಿರಾತು ರಹಿತ: SnatchApp ಉಚಿತ ಹಾಗೂ ನಿರಂತರ ಉಚಿತವಾಗಿರುತ್ತದೆ.
---------------------------------------------------------
SnatchApp ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ನಮ್ಮ ಅಧಿಕೃತ ಜಾಲತಾಣವನ್ನು ನೋಡಿ. http://snatchapp.me