Raw ಚಿತ್ರ ವಿಸ್ತರಣೆಯ ಈ ಆವೃತ್ತಿಯು ಇತರ ದೋಷ ಪರಿಹಾರಗಳಿಗೆ ಸೇರ್ಪಡೆಯಾಗಿ CR3 ಫೈಲ್ಗಳಿಗೆ ಬೆಂಬಲವನ್ನು ಒಳಗೊಂಡಿದೆ!
Raw ಚಿತ್ರ ವಿಸ್ತರಣೆಯ ಬಗ್ಗೆಗಿನ ನಿಮ್ಮ ಆಸಕ್ತಿಗೆ ಧನ್ಯವಾದಗಳು. ನಿಮ್ಮ ಸಾಧನಗಳಲ್ಲಿ ಅಳವಡಿಸಲು ನೀವು ವಿಸ್ತರಣೆಯನ್ನು ಪಡೆದುಕೊಳ್ಳಬಹುದು ಆದರೆ ವಿಸ್ತರಣೆಯನ್ನು ಅಳವಡಿಸಲು Windows 10 ಮೇ 2019 ನವೀಕರಣದ (ಆವೃತ್ತಿ ಸಂಖ್ಯೆ 1903) ಅಗತ್ಯವಿದೆ.
Raw ಚಿತ್ರ ವಿಸ್ತರಣೆಯು ಅನೇಕ ಮಧ್ಯಮದಿಂದ-ಉನ್ನತ ಡಿಜಿಟಲ್ ಕ್ಯಾಮೆರಾಗಳ ಮೂಲಕ ತೆಗೆಯಲಾದ ಪ್ರಕ್ರಿಯೆಗೊಳಿಸದ ಫೈಲ್ ಸ್ವರೂಪಗಳಲ್ಲಿ ಸೆರೆಹಿಡಿದ ಚಿತ್ರಗಳಿಗಾಗಿ ಸ್ಥಳೀಯ ವೀಕ್ಷಣೆ ಬೆಂಬಲವನ್ನು ಸೇರಿಸುತ್ತದೆ. ಪ್ಯಾಕೇಜ್ ಅನ್ನು ಅಳವಡಿಸುವ ಮೂಲಕ, ನೀವು ಬೆಂಬಲಿತ ಪ್ರಕ್ರಿಯೆಗೊಳಿಸದ ಫೈಲ್ ಸ್ವರೂಪಗಳ ಚಿಕ್ಕ ಚಿತ್ರಗಳನ್ನು ಮತ್ತು ಮೆಟಾಡೇಟಾವನ್ನು Windows ಫೈಲ್ ಎಕ್ಸ್ಪ್ಲೋರರ್ ನಲ್ಲಿ ವೀಕ್ಷಿಸಬಹುದು ಅಥವಾ ಫೋಟೋಗಳು ಅಪ್ಲಿಯಲ್ಲಿ ಚಿತ್ರಗಳನ್ನು ವೀಕ್ಷಿಸಬಹುದು. ವಿಸ್ತರಣೆಯ ಪ್ರಸ್ತುತ ಆವೃತ್ತಿಯು ಕ್ಯಾಮೆರಾಗಳ ದೊಡ್ಡ ಪಟ್ಟಿಯನ್ನು ಬೆಂಬಲಿಸುತ್ತದೆ, ಆದರೆ .GPR ಗಳಂತಹ ಕೆಲವು Raw ಮಾದರಿಗಳನ್ನು ಬೆಂಬಲಿಸುವುದಿಲ್ಲ.
ಈ ಪ್ಯಾಕೇಜ್ ಅನ್ನು ಸಾಧ್ಯವಾಗಿಸಿದ ಲಿಬ್ರಾದ ಓಪನ್ ಸೋರ್ಸ್ ಪ್ರಾಜೆಕ್ಟ್ ಗೆ (http://www.libraw.org) ಧನ್ಯವಾದಗಳು. ಬೆಂಬಲಿತ ಕ್ಯಾಮೆರಾಗಳ ಪಟ್ಟಿಗೆ https://www.libraw.org/supported-cameras ಅನ್ನು ಪರಿಶೀಲಿಸಿ. ಲಿಬ್ರಾ ಲೈಬ್ರರಿಯು ಕಾಮನ್ ಡೆವಲಪ್ಮೆಂಟ್ ಮತ್ತು ಡಿಸ್ಟ್ರಿಬ್ಯೂಷನ್ ಲೈಸೆನ್ಸ್ ಆವೃತ್ತಿ 1.0 (CDDL-1.0) ಅಡಿಯಲ್ಲಿ ಪರವಾನಗಿಯನ್ನು ಹೊಂದಿದೆ
ದಯವಿಟ್ಟು ಗಮನಿಸಿ- ಈ ವಿಸ್ತರಣೆಯ ಮೂಲಕ ವಿತರಿಸಲಾದ Raw ಕೊಡೆಕ್ ಚಾಲನೆಗೊಳ್ಳಲು Windows ಗೆ ಬದಲಾವಣೆಯ ಅಗತ್ಯವಿರುತ್ತದೆ. Windows 10 ಮೇ 2019 ನವೀಕರಣ (ಆವೃತ್ತಿ ಸಂಖ್ಯೆ 1903) ಅಥವಾ ಅದರ ನಂತರದ್ದರ ಅಗತ್ಯವಿರುತ್ತದೆ. ನೀವು ವಿಸ್ತರಣೆಯನ್ನು ಅಳವಡಿಸಲು ಸಾಧ್ಯವಾಗದಿದ್ದರೆ, ನಿಮ್ಮ ಸಾಧನವು ವಿಸ್ತರಣೆಯನ್ನು ಚಲಾಯಿಸಲು ಅಗತ್ಯವಿರುವ ಕನಿಷ್ಠ Windows ನಿರ್ಮಾಣ ಸಂಖ್ಯೆಯನ್ನು ಪೂರೈಸಲು ಸಾಧ್ಯವಿಲ್ಲದಿರುವ Windows ಆವೃತ್ತಿಯಲ್ಲಿ ಚಾಲನೆಯಾಗುತ್ತಿದೆ ಎಂದರ್ಥ. ವಿಸ್ತರಣೆಯನ್ನು ಅಳವಡಿಸಲು ನಿಮ್ಮ ಸಾಧನವನ್ನು ಇತ್ತೀಚಿನ ಆವೃತ್ತಿಯ Windows ಗೆ ನವೀಕರಿಸುವುದನ್ನು ಪರಿಗಣಿಸಿ.
ದಯವಿಟ್ಟು ಗಮನಿಸಿ - ವಿಸ್ತರಣೆಯು ಒಂದು ಅಪ್ಲಿಯಲ್ಲ - ನೀವು ನೇರವಾಗಿ ಅದರೊಂದಿಗೆ ಸಂವಹನ ನಡೆಸಲು ಸಾಧ್ಯವಿಲ್ಲ. ಇದು raw ಚಿತ್ರಗಳನ್ನು ಡಿಕೋಡ್ ಮಾಡಲು ಫೈಲ್ ಎಕ್ಸ್ ಫ್ಲೋರರ್ ಮತ್ತು ಫೋಟೋಗಳನ್ನು ಒಳಗೊಂಡಂತೆ Windows ಮೂಲಕ ಬಳಸಲಾಗುವ OS ಕೊಡೆಕ್ ಪ್ಲಗ್-ಇನ್ ಅನ್ನು ಅಳವಡಿಸುತ್ತದೆ. ವಿಸ್ತರಣೆಯನ್ನು ಅಳವಡಿಸಿದ ನಂತರ ಬೆಂಬಲಿತ ಕ್ಯಾಮೆರಾಗಳಿಂದ ಚಿಕ್ಕ ಚಿತ್ರಗಳಿಗಾಗಿ ಫೈಲ್ ಎಕ್ಸ್ ಪ್ಲೋರರ್ ಅಥವಾ ನಿಮ್ಮ raw ಚಿತ್ರಗಳನ್ನು ವೀಕ್ಷಿಸಲು ಫೋಟೋಗಳು ಅಪ್ಲಿಯನ್ನು ದಯವಿಟ್ಟು ಬಳಸಿ.
.