Microsoft OneDrive ಮೂಲಕ ನೀವು ಹೋದಲ್ಲೆಲ್ಲಾ ಮತ್ತಷ್ಟನ್ನು ಮಾಡಿ. ನಿಮ್ಮ Windows 10 ಫೋನ್, ಕಂಪ್ಯೂಟರ್ (PC ಅಥವಾ Mac) ಮತ್ತು ನೀವು ಬಳಸುವ ಇತರೆ ಯಾವುದೇ ಸಾಧನಗಳಿಂದ ನಿಮ್ಮ ದಾಖಲೆಗಳು, ಫೋಟೋಗಳು ಮತ್ತು ಇತರ ಫೈಲ್ಗಳನ್ನು ಹಂಚಿಕೊಳ್ಳಿ. ನೀವು ಎಲ್ಲೇ ಇದ್ದರೂ, ಉತ್ಪಾದಕೀಯವಾಗಿರಲು ಮತ್ತು ಒಟ್ಟಿಗೆ ಕಾರ್ಯನಿರ್ವಹಿಸಲು Office ಮೊಬೈಲ್ ಅಪ್ಲಿಗಳನ್ನು ಬಳಸಿ. Windows 10 ಗಾಗಿ OneDrive ಅಪ್ಲಿಯು ನಿಮಗೆ ನೀವು ಕೆಲಸ ಮಾಡುತ್ತಿರುವಾಗಲೇ ನಿಮ್ಮ ವೈಯಕ್ತಿಕ ಮತ್ತು ಕೆಲಸದ ಫೈಲ್ಗಳ ಜೊತೆಗೆ ಕಾರ್ಯನಿರ್ವಹಿಸಲು ಅವಕಾಶ ನೀಡುತ್ತದೆ.
• ಉಚಿತ ಆನ್ಲೈನ್ ಸಂಗ್ರಹಣೆಯ ಮೂಲಕ ಫೈಲ್ಗಳನ್ನು ಉಳಿಸಿ ಮತ್ತು ಹಂಚಿಕೊಳ್ಳಿ.
• Word, Excel, PowerPoint ಮತ್ತು OneNote ನಂತಹ Office ಅಪ್ಲಿಗಳಲ್ಲಿ OneDrive ಫೈಲ್ಗಳನ್ನು ತ್ವರಿತವಾಗಿ ತೆರೆಯಿರಿ ಮತ್ತು ಉಳಿಸಿ.
• ಸ್ವಯಂಚಾಲಿತ ಟ್ಯಾಗಿಂಗ್ ಸಹಾಯದಿಂದ ಸುಲಭವಾಗಿ ಫೋಟೋಗಳನ್ನು ಹುಡುಕಿ.
• ನಿಮ್ಮ ಮೆಚ್ಚಿನ ಫೋಟೋಗಳು ಮತ್ತು ವೀಡಿಯೋಗಳ ಆಲ್ಬಂಗಳನ್ನು ಹಂಚಿಕೊಳ್ಳಿ.
ಗಮನಿಸಿ: OneDrive for Business ಗೆ ನೀವು ಸೈನ್ ಇನ್ ಮಾಡಲು, ನಿಮ್ಮ ಸಂಸ್ಥೆಯ ಬಳಿಯಲ್ಲಿ ಅರ್ಹತೆಯುಳ್ಳ SharePoint Online ಅಥವಾ Office 365 ವ್ಯವಹಾರ ಚಂದಾದಾರಿಕೆ ಯೋಜನೆ ಇರಬೇಕಾಗುತ್ತದೆ. ಸ್ಥಳದಲ್ಲಿನ ಡೈರೆಕ್ಟರಿಯ ಖಾತೆಯ ಮೂಲಕ ನಿಮಗೆ ಸೈನ್ ಇನ್ ಮಾಡಲಾಗುವುದಿಲ್ಲ.
ಈ ಅಪ್ಲಿಯನ್ನು Microsoft ಒದಗಿಸಿದೆ. ಈ ಸ್ಟೋರ್ ಮತ್ತು ಈ ಅಪ್ಲಿಯ ಬಳಕೆಯ ಮೂಲಕ ಒದಗಿಸಿದ ಡೇಟಾವನ್ನು Microsoft ಪ್ರವೇಶಿಸಬಹುದು ಮತ್ತು ಅದನ್ನು Microsoft ಹಾಗೂ ಅದರ ಅಂಗಸಂಸ್ಥೆಗಳು ಸೌಲಭ್ಯಗಳನ್ನು ಹೊಂದಿರುವ ಸಂಯುಕ್ತ ಸಂಸ್ಥಾನಗಳು ಅಥವಾ ಇತರ ಯಾವುದೇ ದೇಶಕ್ಕೆ ವರ್ಗಾಯಿಸಬಹುದು, ಅಲ್ಲಿ ಸಂಗ್ರಹಿಸಬಹುದು ಮತ್ತು ಪ್ರಕ್ರಿಯಗೊಳಿಸಬಹುದು.