ನಿಮ್ಮ ಬಹುಮಾಧ್ಯಮ ವಿಷಯವನ್ನು ಇನ್ನಷ್ಟು ಸಂತೋಷದಿಂದ ಕೇಳುವಂತಾಗಲು ಮತ್ತು ವೀಕ್ಷಿಸುವಂತಾಗಲು ಮೀಡಿಯಾ ಪ್ಲೇಯರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಮೀಡಿಯಾ ಪ್ಲೇಯರ್ನ ಮುಖ್ಯಭಾಗವು ಪೂರ್ಣ-ವೈಶಿಷ್ಟ್ಯದ ಸಂಗೀತ ಲೈಬ್ರರಿಯಾಗಿದ್ದು ಅದು ಸಂಗೀತವನ್ನು ತ್ವರಿತವಾಗಿ ಬ್ರೌಸ್ ಮಾಡಲು ಮತ್ತು ಪ್ಲೇ ಮಾಡಲು ಜೊತೆಗೆ ಪ್ಲೇಪಟ್ಟಿಗಳನ್ನು ರಚಿಸಲು ಮತ್ತು ನಿರ್ವಹಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ನಿಮ್ಮ PC ಯಲ್ಲಿನ ಸಂಗೀತ ಮತ್ತು ವೀಡಿಯೋ ಫೋಲ್ಡರ್ಗಳಲ್ಲಿನ ನಿಮ್ಮ ಎಲ್ಲಾ ವಿಷಯಗಳು ನಿಮ್ಮ ಲೈಬ್ರರಿಯಲ್ಲಿ ಸ್ವಯಂಚಾಲಿತವಾಗಿ ಗೋಚರಿಸುತ್ತವೆ.